Tuesday, November 18, 2008

No Child Left Behind - A New Law in American Education System

ಸರ್ವಶಿಕ್ಷಾ ಅಭಿಯಾನ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಪ್ರಮುಖವಾದ "ಯಾವುದೇ ಮಗು ಕಲಿಕೆಯಲ್ಲಿ ಹಿಂದುಳಿಯಬಾರದು, ಶಾಲೆಯಿಂದ ಹೊರಗುಳಿಯಬಾರದು" ಎಂಬ ಅಂಶಗಳಿಗೆ ಸಂವಾದಿಯಾದ ವ್ಯವಸ್ಥೆ ಈಗಾಗಲೇ ಅಮೆರಿಕಾದಲ್ಲಿ ಜಾರಿಯಲ್ಲಿದೆ. ಅದನ್ನು ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದೈನಿಕದ ಶಿಕ್ಷಣ ಪುರವಣಿಯಲ್ಲಿ ಬಂದ ಲೇಖನ ಇಲ್ಲಿದೆ ನೋಡಿ.


No Child Left Behind - A New Law in American Education System

Article Published in The New Indian Express
Education Supplement on 17-11-2008


LESSONS FROM AMERICA'S LEARNING EXPERIENCE

Celebrated as the law that ushered in a new era, No Child Left Behind (NCLB) re-authorized the Elementary and Secondary Education Act, which is the princi- pal federal law affecting education from Kindergarten through high school In India, efforts should be made to tie up government aid with performanceS igned into law on January 8, 2002, The No Child Left Behind Act of 2001 (No Child Left Behind) is a landmark in education reform designed to improve and change the culture of US schools. Are there lessons to be learnt by India from America’s most discussed Educational Act?
Celebrated as the law that ushered in a new era, No Child Left Behind (NCLB) re-authorized the Elementary and Secondary Education Act (ESEA)- the principal federal law affecting education from Kindergarten through high school. In exchange for federal aid for education, states must establish systems of accountability that ensure that funds are used to improve the quality of education offered to every child in the State. NCLB- the rationale behind From 1965 through 2005, the US federal government had spent almost $ 300 billion to help educate children, particularly those who are disadvantaged. Despite this investment, the National Assessment of Educational Progress (NAEP) in reading showed that less than one-third of the fourth-graders could read at the proficient or advanced levels.
However, the assessment also showed that some schools in cities and towns achieved strong academic results, including those that have a history of low performance. If some schools could do it, then all schools should be able to do it. That was the rationale behind No Child Left Behind. The law is built on four commonsense pillars: accountability for results, an emphasis on doing what works based on scientific research, expanded parental options and increased local control and flexibility . Accountability for results As part of the accountability provisions, No Child Left Behind has set the goal of having every child achieving proficiency according to state-defined educational standards by the end of the 2013-14 school year. To reach that goal, every state has developed benchmarks to measure progress and make sure every child is learning. Data is analyzed separately for children of different racial and ethnic group, students with disabilities, students from economically disadvantaged home and children who are learning English as a second language. Those schools that do not meet the state’s definition of “adequate yearly progress” for two straight years are identified as ‘in need of improvement’ and they are given assistance to improve.
Provides help to schools in need of improvement NCLB insists that, when a school is found to be “in need of improvement,” school officials are required to work with parents, school staff, the district and outside experts to develop a plan to improve the academic achievement of all the students who attend the school.
The school’s improvement plan must incorporate strategies, relying on scientifically based research that will strengthen the teaching of core academic subjects especially in the subject areas that need improvement. Schools in need of improvement are also expected to develop strategies to promote effective parental involvement in the school and to incorporate a teacher-mentoring program. Scientifically based research No Child Left Behind puts a special emphasis on implementing educational programs and practices that have been clearly demonstrated to be effective through rigorous scientific research. Federal funding is targeted to support such programs, and schools are expected to use research and evidence of effectiveness to identify and select instructional resources, instructional practices and professional development strategies.
Gives parents new options Parents are given the option to transfer their child to another public school, including a charter school, in the same school district. Transportation must be provided to the new school, subject to certain cost limitations. If a school is identified for improvement for two or more years, it must provide public school choice and offer students from low-income families who remain in the school the option of obtaining free supplemental educational services (Tutoring). Other features of NCLB Improves teaching and learning by providing better information to teachers and principals.
Ensures that teacher quality is a high priority Gives more resources to schools.
.
Provides more information for parents about their child’s progress. Alerts parents on important information on the performance of their child’s school. No child left behind and the new administration NCLB has drawn considerable criticism from teachers union and lobbyists. Critics charge that tests vary too widely to evaluate school performance nationwide, that teachers are teaching narrowly to the test, that students who learn in different ways are put at a disadvantage, and that one test shouldn’t determine who passes and who doesn’t especially if there are errors in the test. There also remains the universal refrain from teachers union that resists any move threatening to increase workload. No Child Left Behind- Lessons for India Accountability has been missing in Indian Education System at large. From Research grants to financial aid of schools, very few procedures to ensure accountability have been enforced. Efforts should be made to tie up government aid with performance. India’s performance in rural education is a matter of serious concern. Our diminishing performance in research even from premier institutes like IIT’s should set alarm bells ringing. There is an urgent need for a performance linked funding law like No Child Left Behind. It is time our policy makers and educationists took stock of our dismal performance in the world education scenario. That our premier institutes in technology and science failed to make it in the top 50 in the world is a matter of serious concern. Let us answer the clarion call before it is too late.
S Alfred Devaprasad is CEO,
Alpha Group of Educational Institutions. On invitation, he attended the Inter national Visitors Leadership Program on ‘Education Today’, held in the US from October 14-31. He can be reached at

Saturday, November 15, 2008

Hanging Libraries - Article on the occasion of National Book Week by P. Chandrashekharaiah - Suddigiduga 15-11-2008


ಪ್ರಜಾವಾಣಿ - ಶಿಕ್ಷಣ - ಮಾರ್ಗದರ್ಶಿ ಯಲ್ಲಿ ಪ್ರಕಟವಾದ ಲೇಖನ

ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿರುವ ಬೋವಿ ಕಾಲೊನಿಯ ಸರ್ಕಾ
ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮಾದರಿ ತೂಗು ಗ್ರಂಥಾಲಯಕ್ಕೆ ನೀವೆಲ್ಲರೂ ಒಮ್ಮೆ ಹೋಗಿ ಬನ್ನಿ!





Hanging Libraries
Article on the occasion of
National Book Week
by P. Chandrashekharaiah
Suddigiduga 15-11-2008

Friday, November 14, 2008

Happy Children's Day and National Book Week 2008






ಮಕ್ಕಳ ದಿನಾಚರಣೆ

ಹಾಗೂ

ರಾಷ್ಟ್ರೀಯ ಪುಸ್ತಕ ಸಪ್ತಾಹದ

ಶುಭಾಶಯಗಳು

Tuesday, November 11, 2008

Memorable Moments of Sarva Shiksha Abhiyan






ಸರ್ವ ಶಿಕ್ಷಾ ಅಭಿಯಾನದ ಸಂತಸದ ಕ್ಷಣಗಳು

KSQAO Report 2007-08

National Education Day - 11-11-2008 - Article in Prajavani - Margadarshi Section

ಆಕಾಶವಾಣಿ ಚಿತ್ರದುರ್ಗ ಕೇಂದ್ರದಲ್ಲಿ ನವೆಂಬರ್ 11, 2008 ರಂದು ಬೆಳಗ್ಗೆ 9.05ಕ್ಕೆ
ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಸಂದರ್ಭದಲ್ಲಿ
"ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನ ಯೋಜನೆಯ ಪಕ್ಷಿನೋಟ"
ಕುರಿತು ಮಾತುಕತೆ ಕಾರ್ಯಕ್ರಮ ಏರ್ಪಾಡಾಗಿತ್ತು.
ಚಿತ್ರದುರ್ಗ ಜಿಲ್ಲಾ ಸರ್ವ ಶಿಕ್ಷಾ ಅಭಿಯಾನ ಯೋಜನೆಯ ಉಪ ಯೋಜನಾ ಸಮನ್ವಯಾಧಿಕಾರಿ ಶ್ರೀ ಕೆ.ಪಿ. ಲೋಹಿತೇಶ್ವರ ರೆಡ್ಡಿ, ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳಾದ ಶ್ರೀ ಸಿ. ಶಿವಮೂರ್ತಿ ಮತ್ತು ಶ್ರೀ ಸಿ.ಎಸ್. ವೆಂಕಟೇಶ್ ಅವರುಗಳು ಈ ಮಾತುಕತೆಯಲ್ಲಿ ಪಾಲ್ಗೊಂಡು ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ವಿವಿಧ ಕಾರ್ಯಕ್ರಮಗಳ ಸಮಗ್ರ ಪರಿಚಯ ಮಾಡಿಕೊಟ್ಟರು. ಆಕಾಶವಾಣಿಯ ಪ್ರಸಾರ ನಿರ್ವಾಹಕರಾದ ಶ್ರೀ ಬೇದ್ರೆ ಮಂಜುನಾಥ್ ಅವರು ಈ ಕಾರ್ಯಕ್ರಮ ನಿರ್ವಹಿಸಿದರು.


National Education Day - 11-11-2008
Article in Prajavani - Margadarshi Section

Tuesday, November 4, 2008

SSLC Results - A Success Story of Chitradurga Dist - Article published in Prajavani Daily of 20-05-2008


SSLC Results
A Success Story of Chitradurga Dist
Article published in
Prajavani Daily of 20-05-2008
Bedre Manjunath
ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ
ಚಿತ್ರದುರ್ಗ ಜಿಲ್ಲೆಗೆ ಎರಡನೇ ಸ್ಥಾನ
ಪರಿಶ್ರಮಕ್ಕೆ ಸಿಕ್ಕ ಸೂಕ್ತ ಪ್ರತಿಫಲ

ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಗೊಂಡಾಗ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು ನೋಡಿ ಆಶ್ಚರ್ಯಗೊಂಡವರೇ ಹೆಚ್ಚು! ಸದಾ ಬರದ ಬೇಗೆಗೆ ತುತ್ತಾಗುತ್ತಿರುವ, ಹಿಂದೊಮ್ಮೆ ಅತ್ಯಂತ ಕೆಳ ಸ್ಥಾನದಲ್ಲಿದ್ದ, ಚಿತ್ರದುರ್ಗ ಜಿಲ್ಲೆ ಎರಡನೇ ಸ್ಥಾನಕ್ಕೆ ಜಿಗಿದದ್ದು ಈ ಆಶ್ಚರ್ಯಕ್ಕೆ ಕಾರಣ. ಆದರೆ, ಈ ಫಲಿತಾಂಶಕ್ಕೆ ಕಾರಣಗಳೇ ಬೇರೆ. ಇದು ಯಾವುದೇ ಜಿಲ್ಲೆಯೂ ಅನುಕರಿಸಬಹುದಾದ ಅತ್ಯಂತ ವ್ಯವಸ್ಥಿತವಾದ ಕಾರ್ಯ ಯೋಜನೆಯನ್ನು (ಆಕ್ಷನ್ ಪ್ಲಾನ್) ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಪಟ್ಟ ಪರಿಶ್ರಮಕ್ಕೆ ಸಿಕ್ಕ ಸೂಕ್ತ ಪ್ರತಿಫಲ ಎನ್ನಬಹುದು. 2006ರಲ್ಲಿ ಶೇಕಡಾ 79.24 (4ನೇ ಸ್ಥಾನ), 2007ರಲ್ಲಿ ಶೇಕಡಾ 78.61 (10ನೇ ಸ್ಥಾನ), 2008ರಲ್ಲಿ ಶೇಕಡಾ 79.53 (2ನೇ ಸ್ಥಾನ) ಪಡೆದು ಹೆಚ್ಚಿನ ಏರಿಳಿತವಿಲ್ಲದಂತೆ ಒಂದೇ ರೀತಿಯ ಫಲಿತಾಂಶವನ್ನು ಕಾಯ್ದುಕೊಂಡು ಬರುತ್ತಿರುವ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಗಳಿಸಿಕೊಳ್ಳಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ.
ಯಶಸ್ಸಿನ ಸೂತ್ರ ಏನು?

1. ವಿಷಯವಾರು ಶಿಕ್ಷಕರ ಸಂಘಗಳ ಪರಿಶ್ರಮ:
ಕಳೆದ ಏಳೆಂಟು ವರ್ಷಗಳಿಂದ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಷಯವಾರು ಶಿಕ್ಷಕರ ಸಂಘ (ಟೀಚರ್ಸ್ ಕ್ಲಬ್)ಗಳು ಚಿತ್ರದುರ್ಗ ಜಿಲ್ಲೆಯಲ್ಲಿದ್ದು ತಮ್ಮ ತಮ್ಮ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆ ಕೋಠಿಗಳನ್ನು, ಮಾದರಿ ಪ್ರಶ್ನೆಪತ್ರಿಕೆ ಮತ್ತು ಕೈಪಿಡಿಗಳನ್ನು ಪ್ರಕಟಿಸಿ, ವಿಷಯವಾರು ಸರಣಿ ರಸಪ್ರಶ್ನೆ ನಡೆಸಿದ್ದೇ ಅಲ್ಲದೇ ತಾಲ್ಲೂಕಾವಾರು ಶಿಕ್ಷಕರ ಸಂಘಗಳ ಮೂಲಕ ಹೋಬಳಿ ಮಟ್ಟದಲ್ಲಿ ತರಬೇತಿ ಕಾಯರ್ಾಗಾರಗಳನ್ನು ಏರ್ಪಡಿಸಿ, ಮುಖಾ-ಮುಖಿ ಚಚರ್ೆಗಳನ್ನು ನಡೆಸಿ, ವಿದ್ಯಾಥರ್ಿಗಳು ಮತ್ತು ವಿಷಯ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮಗಳ ಮೂಲಕ ಪ್ರಶ್ನೆಪತ್ರಿಕೆಯ ನೀಲಿನಕ್ಷೆಯನ್ನು ಪರಿಚಯ ಮಾಡಿಕೊಟ್ಟದ್ದು ವಿದ್ಯಾಥರ್ಿಗಳಲ್ಲಿದ್ದ ಪರೀಕ್ಷಾ ಭಯ ನಿವಾರಿಸಿ ಆತ್ಮವಿಶ್ವಾಸ ಮೂಡಿಸುವಲ್ಲಿ ಸಫಲವಾದದ್ದು ಒಂದು ಕಾರಣವಾದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿಶಕರು, ಶಿಕ್ಷಣಾಧಿಕಾರಿಗಳು ಮತ್ತು ವಿಷಯ ಪರಿವೀಕ್ಷಕರ ವೈಯಕ್ತಿಕ ನಿರೀಕ್ಷಣೆಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ವಿಷಯವಾರು ಶಿಕ್ಷಕರ ಸಂಘಗಳ ಚಟುವಟಿಕೆಗಳು ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಮತ್ತೊಂದು ಕಾರಣವಾಗಿವೆ. ಬಹುಶಃ ಇತರೆ ಯಾವುದೇ ಜಿಲ್ಲೆಯಲ್ಲಿ ಇಂತಹ ಶಿಕ್ಷಕರ ಕ್ಲಬ್ ಇಲ್ಲ!
2. ಸರಣಿ ಪೂರ್ವ ಸಿದ್ಧತಾ ಪರೀಕ್ಷೆಗಳು:
ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯನ್ನು ಎದುರಿಸಲು ವಿದ್ಯಾಥರ್ಿಗಳನ್ನು ಸಿದ್ಧಗೊಳಿಸಿ, ಅದರಲ್ಲಿ ಅವರು ಗಳಿಸುವ ಅಂಕಗಳನ್ನು ಆಧರಿಸಿ ಅಂತಿಮ ಪರೀಕ್ಷೆಯಲ್ಲಿ ಎಷ್ಟು ಫಲಿತಾಂಶ ಬರುತ್ತದೆ ಎಂದು ಊಹಿಸುವುದು ಸಾಮಾನ್ಯವಾದ ಪರಿಪಾಠ. ನಾಲ್ಕುವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯಿಂದ ಚಿತ್ರದುರ್ಗಕ್ಕೆ ವರ್ಗವಾಗಿ ಬಂದಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಶ್ರೀ ಎನ್.ಪಿ. ದೇಶಪಾಂಡೆಯವರು ಪ್ರಾಯೋಗಿಕವಾಗಿ ಅಳವಡಿಸಿದ ಮೂರು ಜಿಲ್ಲಾಮಟ್ಟದ ಸರಣಿ ಪೂರ್ವಸಿದ್ಧತಾ ಪರೀಕ್ಷೆಗಳು ಮತ್ತು ಒಂದು ರಾಜ್ಯಮಟ್ಟದ ಪರೀಕ್ಷೆ ಎದುರಿಸಿದ ವಿದ್ಯಾಥರ್ಿಗಳಿಗೆ ಅಂತಿಮ ಪರೀಕ್ಷೆಯಲ್ಲಿ ಈಗಾಗಲೇ ಅವರು ಎದುರಿಸಿದ ಪ್ರಶ್ನೆಗಳೇ ಕಂಡುಬಂದಿದ್ದವು. ಪಠ್ಯಪುಸ್ತಕವನ್ನು ಮತ್ತು ಪ್ರಶ್ನೆಕೋಠಿಯನ್ನು ಸಮಗ್ರವಾಗಿ ಓದಲು ತಿಳಿಸಿ, ಅವುಗಳಿಂದಲೇ ನೀಲನಕ್ಷೆಗನುಗುಣವಾಗಿ ಪ್ರಶ್ನೆಪತ್ರಿಕೆಯನ್ನು ತಯಾರಿಸಿ ಒಂದಾದ ಮೇಲೆ ಒಂದರಂತೆ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆಸಿ, ತಪ್ಪಾಗಿದ್ದರೆ ತಿದ್ದಿಸಿದ್ದರಿಂದ ಅಂತಿಮ ಪರೀಕ್ಷೆಯನ್ನೂ ಮತ್ತೊಂದು ಸುಲಭವಾದ ಪರೀಕ್ಷೆಯೇನೋ ಎಂಬಂತೆ ಎದುರಿಸಿದ ವಿದ್ಯಾಥರ್ಿಗಳು ಅಂದು ಹೆಚ್ಚು ಫಲಿತಾಂಶ ಪಡೆದು 4ನೇ ಸ್ಥಾನಗಳಿಸಿಕೊಳ್ಳಲು ಕಾರಣರಾಗಿದ್ದರು. ಕೆಳಗಿನ ಸ್ಥಾನದಲ್ಲಿದ್ದ ಚಿತ್ರದುರ್ಗ ಮೊದಲ ಹತ್ತು ಸ್ಥಾನಗಳಲ್ಲಿ ಜಾಗಪಡೆದದ್ದು ಅದೇ ಮೊದಲು. ಆನಂತರ ಬಂದ ಶ್ರೀ ನಾಗೇಂದ್ರಪ್ಪ ಮತ್ತು ಈಗಿನ ಉಪನಿದರ್ೇಶಕರಾದ ಶ್ರೀ ಎಲ್. ರಂಗಪ್ಪ, ಶಿಕ್ಷಣಾಧಿಕಾರಿಗಳಾದ ಶ್ರೀ ಲೋಹಿತೇಶ್ವರ ರೆಡ್ಡಿ ಮತ್ತು ಶ್ರೀ ಎನ್. ಎಂ. ರಮೇಶ್ ಅವರುಗಳು ಅದೇ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದು ಹೆಚ್ಚಿನ ಆಸಕ್ತಿವಹಿಸಿದ್ದರಿಂದ ಜಿಲ್ಲೆಯ ಫಲಿತಾಂಶ ಸ್ಥಿರತೆ ಕಾಯ್ದುಕೊಳ್ಳುವಂತಾಯಿತು.
3. ಆಕಾಶವಾಣಿಯ ಪರೀಕ್ಷಾ ಸಿದ್ಧತೆ - ನೇರ ಫೋನ್-ಇನ್-ಕಾರ್ಯಕ್ರಮಗಳು :
ಒಂದು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಮಾಧ್ಯಮವೂ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದಕ್ಕೆ ಕಳೆದ ಐದು ವರ್ಷಗಳಿಂದ ಚಿತ್ರದುರ್ಗ ಆಕಾಶವಾಣಿ ಕೇಂದ್ರ ನಡೆಸಿಕೊಂಡುಬರುತ್ತಿರುವ ಪರೀಕ್ಷಾ ಸಿದ್ಧತೆ - ನೇರ ಫೋನ್ ಇನ್ ಕಾರ್ಯಕ್ರಮಗಳೇ ಉದಾಹರಣೆ. ಏಪ್ರಿಲ್ ಮೊದಲ ಭಾನುವಾರದಿಂದ ಆರಂಭಿಸಿ ಮಾಚರ್್ ಕೊನೆಯ ಭಾನುವಾರದವರೆಗೆ ಪ್ರತಿವಾರವೂ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳ ಜೊತೆ ನಡೆಸುವ ನೇರ ಸಂವಾದ ಕಾರ್ಯಕ್ರಮ ವಿದ್ಯಾಥರ್ಿಗಳು, ಶಿಕ್ಷಕರು ಮತ್ತು ಪೋಷಕರನ್ನು ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಜಾಗೃತರನ್ನಾಗಿಸಿದೆ. ವಿಷಯವಾರು ರಸಪ್ರಶ್ನೆ ಕಾರ್ಯಕ್ರಮಗಳು, ಚಚರ್ೆ, ಅಭಿಪ್ರಾಯ ಸಂಗ್ರಹಣೆ, ಕುಂದುಕೊರತೆಗಳ ವಿಚಾರಣೆಗಳು ಮತ್ತು ಸಮಸ್ಯಾ ಪರಿಹಾರಕ್ಕೆಂದಿರುವ ನೇರ ಸಂವಾದ ಕಾರ್ಯಕ್ರಮಗಳು ಡಿಸೆಂಬರ್ನಿಂದ ಮಾಚರ್್ವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆ ಕಾರ್ಯಕ್ರಮಗಳಾಗಿ ಬದಲಾಗುತ್ತವೆ. ಸುತ್ತಮುತ್ತಲ ಸುಮಾರು 11 ತಾಲ್ಲೂಕುಗಳ ವಿದ್ಯಾಥರ್ಿಗಳು ಭಾನುವಾರ ಬೆಳಗ್ಗೆ 9.05 ರಿಂದ 9.35ರವರೆಗೆ ಆಕಾಶವಾಣಿಗೆ ಫೋನ್ ಮಾಡಿ ವಿಷಯತಜ್ಞರೊಂದಿಗೆ ನೇರ ಸಂವಾದ ನಡೆಸಿ ಪ್ರಶ್ನೆ ಪತ್ರಿಕೆಗೆ ಮತ್ತು ಕ್ಲಿಷ್ಟವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಾರೆ. ಈ ಸಂವಾದ ಕಾರ್ಯಕ್ರಮವನ್ನು ಕೇಳಲು ಶಿಕ್ಷಣ ಇಲಾಖೆ ಶಾಲೆಗಳಿಗೆ ಪ್ರತ್ಯೇಕ ರೇಡಿಯೋಗಳನ್ನು ಕೊಳ್ಳುವಂತೆ ಆದೇಶಿಸಿದೆ ಮತ್ತು ಆಯಾ ದಿನಗಳಂದು ಶಾಲೆಯಲ್ಲಿ ಸೇರಿ ಒಟ್ಟಿಗೇ ಕೇಳುವಂತೆ, ಕಾರ್ಯಕ್ರಮದಲ್ಲಿ ಶಾಲೆಯ ಇಲ್ಲವೇ ಶಿಕ್ಷರ ಫೋನ್ ಬಳಸಿ ಮಾತನಾಡಲೂ ಅವಕಾಶ ಮಾಡಿಕೊಟ್ಟಿದೆ. ಪರೀಕ್ಷೆಗಳ ಸಂದರ್ಭದಲ್ಲಿ ಮಕ್ಕಳು ಏನಾದರೂ ತೊಂದರೆ ಅನುಭವಿಸಿದ್ದರೆ ಸಹಾಯವಾಣಿ ಮೂಲಕ ನೆರವು ನೀಡಿದೆ. ಫಲಿತಾಂಶ ಬಂದ ಮೇಲೆ ಅತ್ಯಂತ ಹೆಚ್ಚು ಅಂಕಗಳಿಸಿದ ಮಕ್ಕಳೊಂದಿಗೆ ನೇರ ಸಂವಾದ ಕಾರ್ಯಕ್ರಮಗಳನ್ನು ನಡೆಸಿ ಮುಂದಿನ ತಂಡದ ಮಕ್ಕಳು ಉತ್ತೇಜನಗೊಳ್ಳುವಂತೆ ಆಕಾಶವಾಣಿ ನೋಡಿಕೊಂಡಿದೆ. ಪೋಷಕರ ಪ್ರೋತ್ಸಾಹ ಮತ್ತು ಒತ್ತಾಯದಿಂದ ಮಕ್ಕಳು ರೇಡಿಯೋದ ಮುಂದೆ ಕುಳಿತು ಕೇಳಿದ್ದರ ಪರಿಣಾಮ ಉತ್ತಮ ಫಲಿತಾಂಶವಾಗಿ ಹೊರಹೊಮ್ಮಿದೆ.

4. ಐ.ಎ.ಎಸ್., ಕೆ.ಎ.ಎಸ್. ಪರೀಕ್ಷೆಗಳಲ್ಲಿ ರ್ಯಾಂಕ್ಗಳಿಸಿದವರು ಸ್ಪೂತರ್ಿಯ ಸೆಲೆಯಾದದ್ದು:
ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರದುರ್ಗ ಜಿಲ್ಲೆ ಐ.ಎ.ಎಸ್., ಕೆ.ಎ.ಎಸ್. ಮೊದಲಾದ ಉನ್ನತ ಹುದ್ದೆಗಳ ಪರೀಕ್ಷೆಗಳಲ್ಲಿ ಒಂದಲ್ಲಾ ಒಂದು ರ್ಯಾಂಕ್ಗಳಿಸುತ್ತಲೇ ಇದೆ. ಕೆಲವೊಮ್ಮೆ ನಾಲ್ಕೈದು ಮಂದಿ ಯಶಸ್ಸುಗಳಿಸಿದ್ದೂ ಇದೆ. ಈ ಉನ್ನತ ಪರೀಕ್ಷೆಗಳಲ್ಲಿ ರ್ಯಾಂಕ್ಗಳಿಸಿದವರು ನಮ್ಮ ಗ್ರಾಮೀಣ ಅಭ್ಯಥರ್ಿಗಳೇ ಅಲ್ಲವೇ? ಅವರಿಂದ ಸಾಧ್ಯವಾದದ್ದು ನಮ್ಮಿಂದಲೂ ಏಕೆ ಸಾಧ್ಯವಾಗುವುದಿಲ್ಲ? ನಾವೂ ಮಾಡುತ್ತೇವೆ ನೋಡಿ ಎಂಬ ಆತ್ಮವಿಶ್ವಾಸದಿಂದ ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದಾರೆ. ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಆಗಾಗ್ಗೆ ಏರ್ಪಡಿಸುವ ಸಮಾರಂಭಗಳಲ್ಲಿ ಈ ರ್ಯಾಂಕ್ ವಿಜೇತರು ಭಾಗವಹಿಸಿ ಮಕ್ಕಳಲ್ಲಿ ಸ್ಫೂತರ್ಿ ತುಂಬಿದ್ದಾರೆ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸುವ ನಗರ ಮತ್ತು ಗ್ರಾಮೀಣ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಲೆಂದೇ ಕಳೆದ ಆರು ವರ್ಷಗಳಿಂದ ಚಿತ್ರದುರ್ಗದ ಐಶ್ವರ್ಯ ಫೋಟರ್್ ಗ್ರೂಪ್ ಆಫ್ ಹೋಟಲ್ಸ್ ಮತ್ತು ಸಮಾಜ ಸೇವಾ ಸಂಸ್ಥೆ ವಿಶೇಷ ಸಮಾರಂಭವನ್ನು ಜೊತೆಗೆ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪಧರ್ೆಗಳನ್ನು ಏರ್ಪಡಿಸುತ್ತಿದ್ದು ಈ ಸಮಾರಂಭದಲ್ಲಿ ಸ್ಪಧರ್ಾತ್ಮಕ ಪರೀಕ್ಷೆಗಳ ರ್ಯಾಂಕ್ ವಿಜೇತರು ಭಾಗವಹಿಸಿ ವಿದ್ಯಾಥರ್ಿಗಳನ್ನು ಹುರಿದುಂಬಿಸುತ್ತಾ ಬಂದಿದ್ದಾರೆ. ಈ ರೀತಿಯ ಬೆನ್ನುತಟ್ಟುವಿಕೆ ಇದ್ದರೆ ಯಾರು ತಾನೇ ಗೆಲ್ಲುವುದಿಲ್ಲ ಹೇಳಿ?

5. ಶಾಲೆಗಳ ವಿಶೇಷ ಕೋಚಿಂಗ್ ಶಿಬಿರಗಳು:
ನಮ್ಮ ಶಾಲೆಯ ವಿದ್ಯಾಥರ್ಿಗಳು ಅತಿ ಹೆಚ್ಚು ಅಂಕಗಳಿಸಬೇಕು, ನೂರಕ್ಕೆ ನೂರು ಫಲಿತಾಂಶ ಬರಬೇಕು ಎಂದು ಚಿತ್ರದುರ್ಗದ ಬಹುತೇಕ ಎಲ್ಲಾ ಶಾಲೆಗಳ ಮುಖ್ಯಸ್ಥರು ತಾವಾಗಿಯೇ ಎಸ್.ಎಸ್.ಎಲ್.ಸಿ. ತರಗತಿಗಳನ್ನು ಒಂದು ತಿಂಗಳು ಮುಂಚಿತವಾಗಿಯೇ ಆರಂಭಿಸಿ ವಿಶೇಷ ಕೋಚಿಂಗ್ ನೀಡುತ್ತಿದ್ದಾರೆ. ರಜಾ ಕಡಿತ ಎಂದು ಭಾವಿಸಿದರೂ ವಿದ್ಯಾಥರ್ಿಗಳು ಖುಷಿಯಿಂದಲೇ ತರಗತಿಗಳಿಗೆ ಹಾಜರಾಗಿ ಕಲಿಕೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಖಾಸಗೀ ಟ್ಯೂಷನ್ ತರಗತಿಗಳೂ ಒಂದು ತಿಂಗಳು ಮುಂಚೆಯೇ ಇಲ್ಲಿ ಆರಂಭವಾಗುತ್ತವೆ. ಮೂರು ನಾಲ್ಕು ವರ್ಷದ ಪ್ರಶ್ನೆಪತ್ರಿಕೆಗಳನ್ನು ಕಡ್ಡಾಯವಾಗಿ ಬಿಡಿಸುವುದು ಮತ್ತು ಮೂರು ಸರಣಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಎದುರಿಸುವುದು, ಸಂಶಯವಿದ್ದಲ್ಲಿ ನೇರ ಸಂವಾದ ಕಾರ್ಯಕ್ರಮಗಳಲ್ಲಿ ನಿರ್ಭಯವಾಗಿ ಚಚರ್ಿಸುವ ವಿದ್ಯಾಥರ್ಿಗಳು ನಿರೀಕ್ಷೆಯಂತೆ ಹೆಚ್ಚಿನ ಫಲಿತಾಂಶ ಪಡೆದೇ ಪಡೆಯುತ್ತಾರೆ, ಅಲ್ಲವೇ?

6. ಅಕ್ಷರ ದಾಸೋಹದ ಕಟಾಕ್ಷ - ಬಿಸಿ ಊಟದ ಕರಾಮತ್ತು :
ಹೊಟ್ಟೆ ತುಂಬಿದ್ದರೆ ತಾನೇ ತಲೆ ಓಡುವುದು? ಹಸಿದ ಹೊಟ್ಟೆಯಲ್ಲಿ ಪಾಠ ಕೇಳಲಾಗದೇ, ಕೇಳಿದ್ದು ಅರ್ಥವಾಗದೇ ಒದ್ದಾಡುತ್ತಿದ್ದ ಗ್ರಾಮೀಣ ವಿದ್ಯಾಥರ್ಿಗಳು ಅಕ್ಷರ ದಾಸೋಹದ ಬಿಸಿಯೂಟ ಉಂಡು, ನೆಮ್ಮದಿಯಾಗಿ ಪಾಠ ಕೇಳಿ, ಆಸಕ್ತಿಯಿಂದ ಚಟುವಟಿಕೆಗಳಲ್ಲಿ ಭಾಗವಹಿಸಿ ನಿರಾತಂಕವಾಗಿ ಪರೀಕ್ಷೆ ಬರೆದದ್ದು ಫಲಿತಾಂಶದ ಹೆಚ್ಚಳಕ್ಕೆ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ. ನಗರ ಪ್ರದೇಶದವರಿಗಿಂತ ಬಿಸಿ ಊಟದ ಮಹತ್ವ ಗ್ರಾಮೀಣರ, ಕೃಷಿ ಕಾಮರ್ಿಕರ ಮಕ್ಕಳಿಗೆ ಬಿಸಿ ಊಟದಿಂದ ಆಗಿರುವ ಪ್ರಯೋಜನಗಳನ್ನು ಅವರಲ್ಲಿಗೇ ಹೋಗಿ ತಿಳಿದುಕೊಳ್ಳಬೇಕು. ಅದರ ಒಂದು ಸ್ಯಾಂಪಲ್ ಈ ಬಾರಿಯ ಹೆಚ್ಚಿನ ಫಲಿತಾಂಶ! ಇದಿಷ್ಟೇ ಅಲ್ಲ, ಬದಲಾಗಿರುವ ಪ್ರಶ್ನೆಪತ್ರಿಕೆ, ವಸ್ತುನಿಷ್ಠ ಮಾದರಿಯ ಉತ್ತರಗಳು, ಪ್ರಶ್ನೆ ಪತ್ರಿಕೆಯಲ್ಲಿಯೇ ಉತ್ತರಿಸುವಂತೆ ಮಾಡಿರುವ ವಿನ್ಯಾಸ ತಪ್ಪು ಉತ್ತರಗಳನ್ನು ಕಡಿಮೆ ಮಾಡಿಸಿವೆ. ಹೊಸ ಪೀಳಿಗೆಯ ವಿದ್ಯಾಥರ್ಿಗಳು ಅನುತ್ತೀರ್ಣ ಎಂಬ ಪದವನ್ನೇ ಕೇಳಲು ಇಷ್ಟಪಡುತ್ತಿಲ್ಲ. ತಮ್ಮ ಕೈಲಾದ ಮಟ್ಟಿಗೆ ಹೆಚ್ಚಿನ ಪರಿಶ್ರಮ ಹಾಕುತ್ತಾರೆ. ಎಲ್ಲಿಯೋ ಅಲ್ಲೊಂದು ಇಲ್ಲೊಂದು ಅಪಸ್ವರಗಳು ಕೇಳಿಬಂದರೂ ಸ್ಥಿರ ಫಲಿತಾಂಶದ ಹಿನ್ನೆಲೆಯನ್ನು ನೋಡಿದಾಗ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ ಅನ್ನಿಸುತ್ತದೆ. ಇದೇ ಮಾದರಿಯನ್ನು ಬೇರೆ ಜಿಲ್ಲೆಗಳೂ ಅನುಸರಿಬಹುದು. ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡು ಉನ್ನತ ಸ್ಥಾನಗಳಿಸಿಕೊಳ್ಳಬಹುದು. ಶಿಕ್ಷಣ ಇಲಾಖೆಯ ಹೊಸ ಹೊಸ ತರಬೇತಿ ಕಾರ್ಯಕ್ರಮಗಳು ಶಿಕ್ಷಕರನ್ನು ಹುರಿದುಂಬಿಸಿದ್ದು ಮೊದಲ ಸ್ಥಾನಕ್ಕೆ ಪೈಪೋಟಿ ನೀಡುವಂತೆ ವಿದ್ಯಾಥರ್ಿಗಳನ್ನು ಸಿದ್ಧರನ್ನಾಗಿಸಲು ಪ್ರೇರೇಪಿಸಿದೆ. ಇಷ್ಟೆಲ್ಲಾ ಸಿದ್ಧತೆಗಳೊಂದಿಗೆ ಮುಂದುವರೆಯುತ್ತಿರುವ ಚಿತ್ರದುರ್ಗ ಜಿಲ್ಲೆ ಮುಂದಿನ ವರ್ಷ ಮೊದಲ ಸ್ಥಾನ ಪಡೆದುಕೊಳ್ಳಲಿ ಎಂದು ಹಾರೈಸೋಣ.
ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಚಿತ್ರದುರ್ಗ

World Health Day - Article in Prajavani Daily - April 01, 2008


World Health Day
Article in
Prajavani Daily

Education Supplement April 01, 2008
Bedre Manjunath

World Water Day - March 22, 2008 - Article in Prajavani Daily (Kannada)

World Water Day
March 22, 2008
Article in
Prajavani Daily (Kannada)
Bedre Manjunath